ತುಮಕೂರು: ಬಾಬರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್ ನಲ್ಲಿ ಎರಡು ಗೊಂಬೆ ಇಟ್ಟು ಇದೇ ರಾಮ ಎನ್ನುತ್ತಿದ್ದರು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿಮಾತನಾಡಿದ ಅವರು, ನಮ್ಮೂರಿನ ದೇವಸ್ಥಾನಕ್ಕೆ ಹೋದರೆ ಅಲ್ಲೊಂಥರಾ ವೈಬ್ರೇಶನ್ ಇರುತ್ತದೆ. ಭಕ್ತಿ ತುಂಬಿ ಬರುತ್ತದೆ. ಆದರೆ ಅವತ್ತು ನನಗೇನೂ ಅನಿಸಲೇ ಇಲ್ಲ. ಟೂರಿಂಗ್ ಟಾಕೀಸ್ ನಲ್ಲಿಗೊಂಬೆ ಇಟ್ಟಿದ್ದಾರೆ ಅನಿಸಿತು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ ಸಂಸದ ಅನಂತಕುಮಾರ ಹೆಗಡೆ ಬಗ್ಗೆಯೂ ವಾಗ್ದಾಳಿ ನಡೆಸಿದರು. ” ನಾಲ್ಕುವರೆ ವರ್ಷ ಮಲಗಿರುತ್ತಾನೆ, ಅದೆಲ್ಲಿ ಇರುತ್ತಾನೋ? ಚುನಾವಣೆಗೆ ಆರು ತಿಂಗಳು ಇರುವಾಗ ಬಂದು ಹೀಗೆ ಮಾತನಾಡುತ್ತಾನೆ. ಹಿಂದುತ್ವ ಹಿಂದುತ್ವ ಅಂತಾನೆ. ಚುನಾವಣೆ ಮುಗಿದ ಮೇಲೆ ಹೊರಟೋದರೆ ಪತ್ತೇನೆ ಇರಲ್ಲ. ಜನರ ಭಾವನೆಗಳನ್ನು ಕೆರಳಿಸೋನು ಜನಪ್ರತಿನಿಧಿ ಆಗಲು ನಾಲಾಯಕ್” ಎಂದು ವಾಗ್ದಾಳಿ ನಡೆಸಿದರು.