ಪಾಕಿಸ್ತಾನದ ಚುನಾವಣೆ ಮುಂದೂಡಿಕೆ ಇಲ್ಲ

Prasthutha|

ಇಸ್ಲಾಮಾಬಾದ್:‌ ಫೆಬ್ರವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲು ಸೆನೆಟ್‌ ಅಂಗೀಕರಿಸಿದ ನಿರ್ಣಯವನ್ನು ಪಾಕಿಸ್ತಾನದ ಚುನಾವಣಾ ಆಯೋಗ ಸೋಮವಾರ ತಿರಸ್ಕರಿಸಿದೆ.

- Advertisement -

ದೇಶದಲ್ಲಿ ರಾಜಕೀಯ ಅನಿಶ್ಚಿತತೆ, ಶೀತ ಹವಾಮಾನ ಮತ್ತು ಭದ್ರತಾ ಉಲ್ಲೇಖಿಸಿ ಸಂಸತ್ತಿನ ಮೇಲ್ಮನೆ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುವ ನಿರ್ಣಯವನ್ನು ಜನವರಿ 5 ರಂದು ಅಂಗೀಕರಿಸಿತ್ತು.

ಆದರೆ ಪಾಕಿಸ್ತಾನದ ಚುನಾವಣಾ ಆಯೋಗ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿದ್ದು, ಉಸ್ತುವಾರಿ ಫೆಡರಲ್ ಮತ್ತು ಪ್ರಾಂತೀಯ ಸರ್ಕಾರಗಳಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸಲು ಹಾಗೂ ಮತದಾರರಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಆಯೋಗ ಬದ್ಧವಾಗಿದೆ ಎಂದು ಹೇಳಿದೆ.

- Advertisement -

ಶಾಂತಿಯುತ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ 2024ರ ಫೆಬ್ರುವರಿ 8ರಂದು ಚುನಾವಣೆ ನಡೆಸಲು ಬದ್ದ ಎಂದು ಸುಪ್ರೀಂ ಕೋರ್ಟ್‌ಗೂ ತಿಳಿಸಿರುವುದಾಗಿ ಆಯೋಗ ಹೇಳಿದೆ.



Join Whatsapp