ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆ ಬಗ್ಗೆ ಮಹತ್ವದ ಆದೇಶ ನೀಡಿದ ಸರಕಾರ

Prasthutha|

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆ ನಡೆಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ.

- Advertisement -

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ / ಸ್ಮಶಾನ/ ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಿದೆ.

ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ‘ನಡೆಸಲು ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಚಿತಾಗಾರ / ಸ್ಮಶಾನ/ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ತರುವ ಮೃತದೇಹಗಳನ್ನು ಚಿತಾಗಾರ / ಸ್ಮಶಾನದ ಸಿಬ್ಬಂದಿಯು ನಿರಾಕರಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು (N -95 ಮಾಸ್ಕ್, ಗೊವ್ ಹಾಗೂ ಪಿಪಿಇ ಕಿಟ್ ಧರಿಸುವುದು ಮತ್ತು ಅಂತ್ಯಕ್ರಿಯೆ ನಡೆಸಿದ ನಂತರ ಅವುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡುವುದು) ಅಂತ್ಯಕ್ರಿಯೆಯನ್ನು ನಡೆಸಲು ತಿಳಿಸುವಂತೆ ಈ ಮೂಲಕ ಸೂಚಿಸಿದೆ.

- Advertisement -

ಈ ನಿಟ್ಟಿನಲ್ಲಿ, ಬಿ, ಬಿ.ಎಂ.ಪಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದೆ.



Join Whatsapp