ಹಣ ಕೊಟ್ಟು ಗ್ಯಾಂಗ್ ರೇಪ್ ಕೇಸ್ ಹಿಂಪಡೆಯಲು ಹೇಳಿದ್ದ ಪೊಲೀಸರು: ಬೊಮ್ಮಾಯಿ ಗಂಭೀರ ಆರೋಪ

Prasthutha|

ಹಾವೇರಿ: ಹಾನಗಲ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಸಂತ್ರಸ್ತೆಗೆ ಹಣ ಕೊಟ್ಟು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

- Advertisement -

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ, ಹಣ ಕೊಟ್ಟರೂ ಸಾಮೂಹಿಕ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ಪೊಲೀಸರ ಯತ್ನ ವಿಫಲವಾಗಿದೆ ಎಂದಿದ್ದಾರೆ.

ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದರು. ಈ ವಿಚಾರ ಇದೀಗ ಬಹಿರಂಗವಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಕೊಡಬೇಕು. ತನಿಖೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪೊಲೀಸರಿಂದ ನಾವೇನೂ ನಿರೀಕ್ಷೆ ಮಾಡಲು ಆಗಲ್ಲ ಎಂದು ಮಾಜಿ ಸಿಎಂ ಹೇಳಿದರು.



Join Whatsapp