ನವದೆಹಲಿ : ‘INDIA’ ಮೈತ್ರಿಕೂಟ ಸಂಚಾಲಕರಾಗಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲು ಯಾದವ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
‘INDIA’ ಬಣದ ಸದಸ್ಯರು ಇಂದು ವರ್ಚುವಲ್ ಸಭೆ ನಡೆಸಿದ ನಂತರ ಈ ಬೆಳವಣಿಗೆಗಳು ನಡೆದಿವೆ. ಸಭೆಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಭೆಯಲ್ಲಿ ಭಾಗವಹಿಸಲಿಲ್ಲ.
ನಿತೀಶ್ ಕುಮಾರ್ ಅವರನ್ನ ಮೊದಲು ಬಣದ ಸಂಚಾಲಕರಾಗಲು ಪ್ರಸ್ತಾಪಿಸಲಾಯಿತು. ಆದ್ರೆ, ಅವರು ಈ ಸ್ಥಾನವನ್ನ ನಿರಾಕರಿಸಿದರು ಮತ್ತು ಮೈತ್ರಿಕೂಟದ ಸಂಚಾಲಕರನ್ನಾಗಿ ಮಾಡಿ ಎಂದು ಹೇಳಿದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಲು ಸಭೆಯಲ್ಲಿ ಒಮ್ಮತ ಮೂಡಿದೆ.