ಚಿಕ್ಕಮಗಳೂರು: 8 ದಿನಗಳ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ

Prasthutha|

ಚಿಕ್ಕಮಗಳೂರು: ಎಮ್ಮೆಯೊಂದು ಎಂಟು ದಿನಗಳ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರದಿಯಾಗಿದೆ.

- Advertisement -

ಎನ್.ಆರ್.ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿ ಸಿಗುವ ಹಳಿಯೂರಿನ ಸುಧಾಕರ ಗೌಡ ಎಂಬವರ ಮನೆಯ ಎಮ್ಮೆ ವಾರದ ಹಿಂದೆ ಗಂಡು ಕರು ಹಾಕಿತ್ತು. ವಿಚಿತ್ರವೆಂದರೆ, ಮಂಗಳವಾರ ಬೆಳಿಗ್ಗೆ ಮತ್ತೊಂದು ಗಂಡು ಕರು ಹಾಕಿದೆ.


ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿದ ಸುಧಾಕರ್, “ನಾನು ಹಲವು ವರ್ಷಗಳಿಂದ ಹಸು ಸಾಕುತ್ತಿದ್ದೇನೆ. ಸಾಮಾನ್ಯವಾಗಿ ಹಸು ಎರಡು ಕರು ಹಾಕುವುದಾದರೆ ಒಂದೇ ದಿನದಲ್ಲೇ ಹಾಕುತ್ತದೆ. ಆದರೆ ಈ ಎಮ್ಮೆ ಒಂದು ಕರು ಹಾಕಿ ಎಂಟು ದಿನಗಳ ನಂತರ ಮತ್ತೊಂದು ಕರು ಹಾಕಿರುವುದು ವಿಶೇಷ. ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಿಲ್ಲ. ಈ ಸಂಗತಿಯನ್ನು ಈಗಾಗಲೇ ಪಶು ಇಲಾಖೆಯ ಗಮನಕ್ಕೆ ತಂದಿದ್ದೇನೆ. ಅವರು ಬಂದು ನೋಡುವುದಾಗಿ ಹೇಳಿದ್ದಾರೆ” ಎಂದರು.



Join Whatsapp