ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಮೃತ್ಯು

Prasthutha|

ಆಂಧ್ರ ಪ್ರದೇಶ: ಮನೆಯಲ್ಲಿ ಆಟವಾಡುತ್ತಾ ನಿಂಬೆಹಣ್ಣು ನುಂಗಿದ ಮಗುವೊಂದು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂನಲ್ಲಿ ನಡೆದಿದೆ.

- Advertisement -

ಜಸ್ವಿತಾ (9 ತಿಂಗಳು) ಮೃತ ಮಗು. ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯದ ಸಾಕಿದೀಪ ಮತ್ತು ಗೋವಿಂದರಾಜ್​​​​ ದಂಪತಿಯ ಪುತ್ರಿ.

ಜಸ್ವಿತಾ ಎಂದಿನಂತೆ ಮನೆಯಲ್ಲಿ ಆಡುತ್ತಿರುವಾಗ ತಾಯಿ ಮತ್ತೊಂದು ಕಡೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಜಗಲಿಯಲ್ಲಿದ್ದ ನಿಂಬೆಹಣ್ಣನ್ನು ಹಿಡಿದು ನುಂಗಿದೆ. ಇದರಿಂದಾಗಿ ಮಗುವಿನ ಉಸಿರಾಟದಲ್ಲಿ ತೊಂದರೆ ಆಗಿದೆ. ಕೂಡಲೇ ತಾಯಿ ಗಂಟಲಿನಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿದ್ದು, ವಿಫಲರಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

- Advertisement -

ಆಸ್ಪತ್ರೆಯಲ್ಲಿ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದಿದ್ದಾರೆ. ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಗೆ ಮದುವೆಯಾದ 7 ವರ್ಷದ ಬಳಿಕ ಜನಿಸಿದ ಮಗು ಇದಾಗಿತ್ತು. ಇಡೀ ಕುಟುಂಬವೇ ಶೋಕದಲ್ಲಿ ಮುಳುಗಿದೆ.



Join Whatsapp