ಮನೆಗಳಿಗೆ ಬೀಗ!
ಅಹಮದಾಬಾದ್: 2002ರ ಬಿಲ್ಕಿಸ್ ಬಾನು ಪ್ರಕರಣದ ಕ್ರೂರ 11 ಅಪರಾಧಿಗಳಿಗೆ ನೀಡಲಾಗಿದ್ದ ಕ್ಷಮಾದಾನವನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಅವರನ್ನು ಮತ್ತೆ ಜೈಲಿಗೆ ಹಾಕ ಬೇಕು ಎಂದು ಆದೇಶಿಸಿರುವ ಬೆನ್ನಲ್ಲೇ ಎಲ್ಲ ಅಪರಾಧಿಗಳೂ ನಾಪತ್ತೆಯಾಗಿದ್ದಾರೆ. ಅಪರಾಧಿಗಳ ಮನೆಗೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.
ಅಪರಾಧಿಗಳ ಪೈಕಿ ಇಬ್ಬರು ಗುಜರಾತ್‌ನ ರಣಧಿಕ್‌ಪುರದ ಮತ್ತು 9 ಜನ ಸಿಂಗವಾಡ್ ಗ್ರಾಮದ ನಿವಾಸಿಗಳು. ಇದೀಗ ಎರಡೂ ಗ್ರಾಮದಿಂದ ಅಪರಾಧಿಗಳು ನಾಪತ್ತೆಯಾಗಿದ್ದಾರೆ. ಅಲ್ಲದೆ, ಅಪರಾಧಿಗಳ ಕುರಿತು ಅವರ ಕುಟುಂಬಸ್ಥರೂ ಯಾವುದೇ ಸುಳಿವು ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ಕುಟಂಬಸ್ಥರ ಮನೆಗಳಿಗೂ ಬೀಗ ಹಾಕಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಜೀವಾವಧಿಗೆ ಗುರಿಯಾಗಿದ್ದ 11 ದೋಷಿಗಳಿಗೆ ಗುಜರಾತ್ ಸರ್ಕಾರ ಕ್ಷಮೆನೀಡಿತ್ತು. ಇದರ ವಿರುದ್ಧ ಬಿಲ್ಕಿಸ್ ಸುಪ್ರೀಂ ಮೆಟ್ಟಿಲೇರಿದ್ದಳು.