ಒಂದು ದೇಶ, ಒಂದು ಚುನಾವಣೆ: ಸಮಿತಿಗೆ ಬಂದ 5000ಕ್ಕೂ ಹೆಚ್ಚು ಸಲಹೆ

Prasthutha|

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ’ ಕುರಿತಂತೆ ರಚನೆಯಾಗಿರುವ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ಈವರೆಗೆ ಸಾರ್ವಜನಿಕರಿಂದ 5,000ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.

- Advertisement -

ಸಮಿತಿ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತಂತೆ ಸಾರ್ವಜನಿಕರಿಂದ ಸಲಹೆಗಳನ್ನು ಕಳೆದ ವಾರ ಆಹ್ವಾನಿಸಿತ್ತು. ಜನವರಿ 15ರವರೆಗೆ ಸಲ್ಲಿಕೆಯಾಗುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಸಮಿತಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಚನೆಯಾಗಿದ್ದು, ಈವರೆಗೆ ಎರಡು ಸಭೆಗಳನ್ನು ನಡೆಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಸಮಿತಿಯು ರಾಜಕೀಯ ಪಕ್ಷಗಳಿಗೆ ಇತ್ತೀಚೆಗೆ ಪತ್ರ ಬರೆದಿತ್ತು.

- Advertisement -

ಆರು ರಾಷ್ಟ್ರೀಯ ಪಕ್ಷಗಳು, 33 ಪ್ರಾದೇಶಿಕ ಪಕ್ಷಗಳು ಹಾಗೂ ಗುರುತಿಸಲಾಗದ ಏಳು ನೋಂದಾಯಿತ ಪಕ್ಷಗಳಿಗೆ ಸಮಿತಿ ಪತ್ರ ಬರೆದಿತ್ತು. ಇದುವರೆಗೆ ಸಮಿತಿಗೆ ಸಮಿತಿಗೆ 5000ಕ್ಕೂ ಹೆಚ್ಚು ಸಲಹೆ ಬಂದಿದೆ ಎಂದು ವರದಿಯಾಗಿದೆ.



Join Whatsapp