ಸ್ಪೀಕರ್ ತೀರ್ಪಿಗೆ ಉದ್ಧವ್ ಠಾಕ್ರೆ ಬಣ ಕಿಡಿ

Prasthutha|

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ನೀಡಿದ ತೀರ್ಪಿಗೆ ಶಿವಸೇನಾ ಉದ್ಧವ್ ಠಾಕ್ರೆ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಏಕನಾಥ್ ಶಿಂಧೆ ವಿಧಾನಸಭೆ ಸ್ಪೀಕರ್ ಕೊಟ್ಟ ತೀರ್ಪು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸುಪ್ರೀಂ ಕೋರ್ಟ್‌ಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಈ ತೀರ್ಪು ಸ್ವೀಕಾರಾರ್ಹವಲ್ಲ. ಆದರೆ ಅನಿರೀಕ್ಷಿತವೂ ಅಲ್ಲ. ಪಕ್ಷವು ಸುಪ್ರೀಂ ಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸುತ್ತದೆ ಎಂದು ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ನಾವು ‘ವಹೀ ಹೋತಾ ಹೈ ಜೋ ಮಂಜೂರ್-ಎ-ಖುದಾ ಹೋತಾ ಹೈ’ ಎಂದು ಕೇಳಿದ್ದೇವೆ. 2014ರ ನಂತರ ಹೊಸ ಸಂಪ್ರದಾಯ ಪ್ರಾರಂಭವಾಗಿದೆ, ‘ವಹೀ ಹೋತಾ ಹೈ ಜೋ ಮಂಜೂರ್-ಇ-ನರೇಂದ್ರ ಮೋದಿ ಔರ್ ಅಮಿತ್ ಶಾ ಹೋತಾ ಹೈ’ ಎಂದು ಆದಿತ್ಯ ಠಾಕ್ರೆ ಲೇವಡಿ ಮಾಡಿದ್ದಾರೆ.

- Advertisement -

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಇದು ನೈತಿಕತೆ ಜೊತೆಗಿನ ರಾಜಿಯಾಗಿದೆ. ಸುಪ್ರೀಂ ಕೋರ್ಟಿನಿಂದ ಕಾನೂನುಬಾಹಿರ ಮತ್ತು ‘ಅಸಂವಿಧಾನಿಕ’ ಎಂದು ಕರೆಯಲಾದ ಯಾವುದನ್ನಾದರೂ ‘ಕಾನೂನನ್ನಾಗಿ’ ಆಗಿ ಪರಿವರ್ತಿಸಲಾಗುತ್ತಿದೆ. ಇದು ದುರದೃಷ್ಟಕರ’ ಎಂದು ಅವರು ಹೇಳಿದ್ದಾರೆ.

ಪಕ್ಷವನ್ನು ಮುಗಿಸಲು ಬಿಜೆಪಿಯ ಪಿತೂರಿ ಎಂದು ಶಿವಸೇನೆ (ಯುಬಿಟಿ ಬಣ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಠಾಕ್ರೆ ಅವರು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಉಭಯ ಅಡ್ಡ ಅರ್ಜಿಗಳ ಕುರಿತು ನಾರ್ವೇಕರ್ ಬುಧವಾರ, ಸಿಎಂ ಏಕನಾಥ್ ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎಂದು ಸ್ಪೀಕರ್ ತೀರ್ಪು ನೀಡಿದ್ದು, ಉದ್ಧವ್ ಠಾಕ್ರೆ (ಯುಬಿಟಿ) ಬಣ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.



Join Whatsapp