ಡಿಸಿಎಂ ಹುದ್ದೆ ಸೃಷ್ಟಿ: ಊಹಾಪೋಹದ ಸುದ್ದಿಯಷ್ಟೇ ಎಂದ ರಣದೀಪ್ ಸುರ್ಜೇವಾಲ

Prasthutha|

ಬೆಂಗಳೂರು: ಡಿಸಿಎಂ ಹುದ್ದೆ ಸೃಷ್ಟಿ ವಿಚಾರವೆಲ್ಲಾ ಸಿನಿಮೀಯ ರೀತಿಯ ಊಹಾಪೋಹದ ಸುದ್ದಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

- Advertisement -


ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳು, ಸಚಿವರು ಮತ್ತು ಶಾಸಕರುಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇದೆಲ್ಲಾ ಸಿನಿಮೀಯ ರೀತಿಯ ಊಹಾಪೋಹದ ವಿಷಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಜನರ ಕಲ್ಯಾಣಕ್ಕೆ ನಾವು ಒತ್ತು ನೀಡುತ್ತೇವೆ. ಗ್ಯಾರಂಟಿ ಜಾರಿ ನಮ್ಮ ಆದ್ಯತೆಯಾಗಿದೆ. ಪ್ರತಿಯೊಂದು ತಾಲೂಕುಗಳಲ್ಲಿ, ಕ್ಷೇತ್ರಗಳಲ್ಲಿ ಆಸ್ಪತ್ರೆ, ರಸ್ತೆ, ಬಸ್ ನಿಲ್ದಾಣಗಳು ಹಾಗೂ ಮೂಲಸೌಕರ್ಯಗಳನ್ನು ಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.



Join Whatsapp