ಬೆಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅಪಮಾನಕರ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ವಿಮೆನ್ ಇಂಡಿಯ ಮೂವ್ಮೆಂಟ್ ಸಂಘಟನೆಯ ಪದಾಧಿಕಾರಿಗಳ ಮೇಲೆ 107 ಸೆಕ್ಷನ್ ಅಡಿ ನೋಟಿಸ್ ಜಾರಿಗೊಳಿಸಿರುವ ಬಂಟ್ವಾಳ ನಗರ ಪೊಲೀಸ್ ಉಪನೀರಿಕ್ಷಕರ ವಿರುದ್ಧ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗಕ್ಕೆ WIM ದೂರು ದಾಖಲಿಸಿದೆ.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರತಿಭಟಿಸಲು ಸೂಕ್ತ ಭದ್ರತೆ ಕೋರಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತೆರಳಿದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಪದಾಧಿಕಾರಿಗಳನ್ನು ಸತಾಯಿಸಿ ಅವರ ಮೇಲೆ 107 ನೋಟೀಸ್ ಜಾರಿಗೊಳಿಸಿರುವ ಠಾಣಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ದೂರಿನಲ್ಲಿ ಮನವಿ ಮಾಡಿದೆ.
ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲ, ಅಪಮಾನಕರ,ಅಸಾಂವಿದಾನಿಕ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ನಿಯೋಗದಲ್ಲಿ WIM ರಾಜ್ಯ ಉಪಾಧ್ಯಕ್ಷೆ ಶಾಝಿಯಾ ಬೆಂಗಳೂರು, ರಾಜ್ಯ ಸಮಿತಿ ಸದಸ್ಯೆ ಸಾನಿಯಾ ಮೈಸೂರು, ಬೆಂಗಳೂರು ಜಿಲ್ಲಾಧ್ಯಕ್ಷೆ ಸುಮಯ್ಯಾ, ಕಾರ್ಯದರ್ಶಿ ಆಯಿಷಾ, ಜಿಲ್ಲಾ ಸಮಿತಿ ಸದಸ್ಯೆ ಆಯಿಷಾ ಸಯೀದಾ ಉಪಸ್ಥಿತರಿದ್ದರು.