ಕಾಂಗ್ರೆಸ್ ನೀತಿಯ ವಿರುದ್ಧ ಹೇಳಿಕೆ: ಸಂಸದ ಕಾರ್ತಿ ಚಿದಂಬರಂಗೆ ನೋಟಿಸ್

Prasthutha|

ಚೆನ್ನೈ: ಕಾಂಗ್ರೆಸ್ ನೀತಿಯ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ವಿವರಣೆ ನೀಡುವಂತೆ ತಮಿಳುನಾಡು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಸಂಸದ ಕಾರ್ತಿ ಚಿದಂಬರಂ ಅವರಿಗೆ ನೋಟಿಸ್ ನೀಡಿದೆ.

- Advertisement -


ಇತ್ತೀಚೆಗೆ ‘ದಿನ ತಂತಿ‘ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗೆ ಸರಿಸಮನಾದ ನಾಯಕ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ರಾಹುಲ್ ಗಾಂಧಿಗಿಂತ ನರೇಂದ್ರ ಮೋದಿ ಹೆಚ್ಚು ಜನಪ್ರಿಯ ವ್ಯಕ್ತಿ ಎಂದು ಹೇಳಿದ್ದರು.


ಕಾಂಗ್ರೆಸ್ ನೀತಿ ನಿಯಮಗಳ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು ಈ ಕುರಿತು ವಿವರಣೆ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಹೇಳಿದೆ.



Join Whatsapp