ನವದೆಹಲಿ: ಮದೀನಾ: ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮುಸ್ಲಿಮರ ಪವಿತ್ರ ನಗರ ಮದೀನಾಕ್ಕೆ ಭೇಟಿ ನೀಡಿದ್ದಾರೆ
ಮುಸ್ಲಿಮೇತರ ಭಾರತೀಯ ನಿಯೋಗವೊಂದು ಮದೀನಾ ನಗರವನ್ನು ತಲುಪಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಅಲ್ಲದೆ, ಇದು ಭಾರತದ ರಾಜತಾಂತ್ರಿಕತೆಯ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಸ್ಮೃತಿ ಇರಾನಿ ನಿಯೋಗದೊಂದಿಗೆ ಮದೀನಾ ನಗರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.
ಹಜ್ ಯಾತ್ರೆಗೆ ಸಂಬಂಧಿಸಿದಂತೆ ಅರಬ್ ಅಧಿಕಾರಿಗಳ ಜೊತೆ ದೊಡ್ಡ ಒಪ್ಪಂದ ಭೇಟಿಯ ನಂತರ ಸ್ಮೃತಿ ಇರಾನಿ ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಬರೆದಿದ್ದು, ನಾನು ಇಂದು ಮದೀನಾಕ್ಕೆ ಐತಿಹಾಸಿಕ ಭೇಟಿ ನೀಡಿದ್ದೇನೆ. ಇದು ಇಸ್ಲಾಂ ಧರ್ಮದ ಪವಿತ್ರ ನಗರಗಳಲ್ಲಿ ಒಂದಾಗಿದೆ. ಪ್ರವಾದಿಗಳ ಮಸೀದಿ , ಉಹುದ್ ಪರ್ವತಗಳು ಮತ್ತು ಕುಬಾದ ಮೊದಲ ಇಸ್ಲಾಮಿಕ್ ಮಸೀದಿಗೆ ಭೇಟಿ ನೀಡಿದೆವು. ಈ ಸಮಯದಲ್ಲಿ ಇಸ್ಲಾಂ ಅನ್ನು ಹತ್ತಿರದಿಂದ ತಿಳಿದುಕೊಳ್ಳಲು ಅವಕಾಶವಾಗಿದೆ ಎಂದು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಸಹ ಉಪಸ್ಥಿತರಿದ್ದರು ಎಂದಿದ್ದಾರೆ.