ತಿರುವನಂತಪುರಂ: ಸುದ್ದಿ ಸಂಸ್ಥೆಗಳ ಮೇಲೆ ರಾಜಕಾರಣಿಗಳು ಅಥವಾ ಉದ್ಯಮಿಗಳು ಹೊಂದಿರುವ ಮಾಲೀಕತ್ವವನ್ನು ನಿಯಂತ್ರಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಲಹೆ ನೀಡಿದ್ದಾರೆ.
ಎನ್.ರಾಮಚಂದ್ರನ್ ಫೌಂಡೇಷನ್ ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ತರೂರ್, ಖಾಸಗಿ ವ್ಯಕ್ತಿಗಳು ಮಾಧ್ಯಮಗಳ ಮೇಲೆ ಹೊಂದಿರುವ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಿಬಂಧನೆಗಳು ಇಲ್ಲದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದಿದ್ದಾರೆ.