ಜರ್ಮನ್ ಫುಟ್ಬಾಲ್ ದಂತಕಥೆ, ಫ್ರಾಂಜ್ ಬೆಕೆನ್ಬೌರ್ ತಮ್ಮ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಫ್ರಾಂಜ್ ಬೆಕೆನ್ಬೌರ್ ಅವರು ಡೆರ್ ಕೈಸರ್’ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದರು. 1974 ರಲ್ಲಿ ಆಟಗಾರರಾಗಿ ಮತ್ತು 1990 ರಲ್ಲಿ ವ್ಯವಸ್ಥಾಪಕರಾಗಿ ಪಶ್ಚಿಮ ಜರ್ಮನಿಯೊಂದಿಗೆ ವಿಶ್ವಕಪ್ ಗೆದ್ದಿದ್ದರು.
ಕ್ಲಬ್ ಮಟ್ಟದಲ್ಲಿ, ಮಾಜಿ ಡಿಫೆಂಡರ್ ಅನ್ನು ಬೇಯರ್ನ್ ಮ್ಯೂನಿಚ್ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಅವರು 1974-76 ರಲ್ಲಿ ಜರ್ಮನ್ ದೈತ್ಯರೊಂದಿಗೆ ಸತತ ಮೂರು ಯುರೋಪಿಯನ್ ಕಪ್ಗಳನ್ನು ಗೆದ್ದಿದ್ದಾರೆ. ನಾಲ್ಕು ಬುಂಡೆಸ್ಲಿಗಾ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.