ಬಾಂಗ್ಲಾದೇಶ ಚುನಾವಣೆ: ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಶೇಖ್ ಹಸೀನಾ

Prasthutha|

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆಯಾದ ಶೇಖ್ ಹಸೀನಾ ಗೆಲುವಿನ ನಗೆ ಬೀರಿದ್ದಾರೆ.

- Advertisement -

ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ.

2009ರಿಂದ ವ್ಯೂಹಾತ್ಮಕವಾಗಿ ನೆಲೆಗೊಂಡಿರುವ ದಕ್ಷಿಣ ಏಷ್ಯಾದ ರಾಷ್ಟ್ರವನ್ನು ಆಳುತ್ತಿರುವ ಹಸೀನಾ, 1991ರಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ ನಂತರ ಐದನೇ ಅವಧಿಗೆ ಪ್ರಧಾನಿ ಪಟ್ಟ ಪಡೆದಿದ್ದಾರೆ. ನಿನ್ನೆ ನಡೆದ ಚುನಾವಣೆಯಲ್ಲಿ ಚುನಾವಣಾ ಆಯೋಗವು ಅಂತಿಮ ಲೆಕ್ಕಾಚಾರದ ಪ್ರಕಾರ ಸುಮಾರು ಶೇ.40 ರಷ್ಟು ಮತದಾನವಾಗಿದೆ.ಈ ಗೆಲುವಿನೊಂದಿಗೆ ಹಸೀನಾ ಅವರು ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

300ಸ್ಥಾನಗಳ ಸಂಸತ್ತಿನಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷವು 223 ಸ್ಥಾನಗಳನ್ನು ಗೆದ್ದಿದ್ದು, ಅಗಾಧ ಬಹುಮತದಿಂದ ದಾಖಲೆಯ ನಾಲ್ಕನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.



Join Whatsapp