ಢಾಕಾ: ಶುಕ್ರವಾರ ರಾತ್ರಿ ಬಾಂಗ್ಲಾದೇಶದ ಬೆನಾಪೋಲ್ ರೈಲಿನ ನಾಲ್ಕು ಭೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಐವರು ಮೃತಪಟ್ಟಿದ್ದಾರೆ.
ರೈಲಿನಲ್ಲಿ ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ರೈಲು ಜೆಸ್ಸೋರ್ ನಿಂದ ಢಾಕಾಕ್ಕೆ ತೆರಳುತ್ತಿತ್ತು. ರೈಲು ಸಯಿದಾಬಾದ್ ನ ಗೋಲಬಾಗ್ ಪ್ರದೇಶಕ್ಕೆ ತಲುಪಿದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.