ಮುಂಬೈ: ಭಾರತದಿಂದ ತಲೆಮರೆಸಿಕೊಂಡು ಕರಾಚಿಯಲ್ಲಿ ಜೀವಿಸುತ್ತಿದ್ದಾನೆಂದು ನಂಬಲಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ತಿಯೆ ಶುಕ್ರವಾರ ಪೂರ್ಣಗೊಂಡಿದೆ. ಕೇವಲ ₹15,000 ಮೀಸಲು ಬೆಲೆ ಹೊಂದಿದ್ದ ಒಂದು ಆಸ್ತಿಯನ್ನು 2 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಎರಡು ಜಮೀನುಗಳಿಗೆ ಯಾವುದೇ ಬಿಡ್ ಸಿಗಲಿಲ್ಲ ಎಂದು ತಿಳಿದುಬಂದಿದೆ.
170.98 ಚ.ಮೀ ವಿಸ್ತೀರ್ಣ ಹಾಗೂ ಕೇವಲ ₹ 15,440 ಮೀಸಲು ಬೆಲೆ ಹೊಂದಿದ್ದ ಅತಿ ಚಿಕ್ಕ ಜಮೀನನ್ನು ವಕೀಲ ಅಜಯ್ ಶ್ರೀವಾಸ್ತವ ಎಂಬವರು ₹ 2.01 ಕೋಟಿಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಜಮೀನಿನ ಸರ್ವೆ ನಂಬರ್ ಮತ್ತು ಮೊತ್ತವು ಸಂಖ್ಯಾಶಾಸ್ತ್ರದಲ್ಲಿ ತನ್ನ ಪರವಾಗಿರುವ ಕಾರಣ ಹೆಚ್ಚಿನ ಮೊತ್ತ ಪಾವತಿಸಲು ನಿರ್ಧರಿಸಿದರೆಂದು ಅವರು ಹೇಳಿಕೊಂಡಿದ್ದಾರೆ.
ತಾವು ಕೊಂಡ ಜಾಗದಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುವ ಇಚ್ಛೆಯನ್ನು ವಕೀಲ ಅಜಯ್ ಶ್ರೀವಾಸ್ತವ ವ್ಯಕ್ತಪಡಿಸಿದ್ದಾರೆ.