ಸೊಮಾಲಿಯಾ ಬಳಿ ಅಪಹರಣವಾಗಿದ್ದ ಭಾರತೀಯರ ರಕ್ಷಣೆ!

Prasthutha|

ನವದೆಹಲಿ: ರೋಚಕ ಕಾರ್ಯಾಚರಣೆ ನಡೆಸಿದ ಭಾತತದ ನೌಕಾಪಡೆ ಸೊಮಾಲಿಯಾ ಕರಾವಳಿಯ ಬಳಿ ಹೈಜಾಕ್ ಆಗಿದ್ದ ಹಡಗಿನಿಂದ ಎಲ್ಲ 15 ಭಾರತೀಯರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದೆ. ಈ ಕುರಿತು ಭಾರತೀಯ ನೌಕಾಪಡೆ X ನಲ್ಲಿ ಮಾಹಿತಿ ಹಂಚಿಕೊಂಡಿದೆ.

- Advertisement -

ಲೈಬೀರಿಯಾ ಮೂಲದ ಹಡಗು (MV LILA NORFOLK) ದುಷ್ಕರ್ಮಿಗಳಿಂದ ಉತ್ತರ ಅರೇಬಿಯಾ ಸಮುದ್ರದ ಸೊಮಾಲಿಯಾ ಕರಾವಳಿ ಬಳಿ ಅಪಹರಣವಾಗಿತ್ತು. ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು. ಎಚ್ಚೆತ್ತ ಭಾರತೀಯ ನೌಕಾಪಡೆಯ ಯುದ್ಧನೌಕೆ ‘ಐಎನ್‌ಎಸ್’ ಚೆನ್ನೈ , ಅಪಹರಣಕ್ಕೊಳಗಾದ ಹಡಗಿನ ಕಡೆಗೆ ತೆರಳಿತ್ತು. ಸೈನಿಕರು ಕಾರ್ಯಾಚರಣೆ ನಡೆಸಿ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿದೆ ಎಂದು ವರದಿಗಳು ತಿಳಿಸಿವೆ.

ಹಡಗು ಬ್ರೆಜಿಲ್‌ನ ಡು ಅಕೊ ಬಂದರಿನಿಂದ ಸಂಚಾರ ಆರಂಭಿಸಿದ್ದು, ಬಹರೇನ್‌ನ ಖಲೀಫಾ ಬಿನ್ ಸಲ್ಮಾನ್‌ಗೆ ತೆರಳುತ್ತಿತ್ತು. ಅಪಹರಣಕ್ಕೆ ಒಳಗಾದಾಗ ಸೊಮಾಲಿಯಾ ಪೂರ್ವದಲ್ಲಿ 300 ನಾಟಿಕಲ್‌ ಮೈಲು ದೂರದಲ್ಲಿತ್ತು.

- Advertisement -



Join Whatsapp