ಬಾಬರಿ ಮಸೀದಿಗಾಗಿ ಹೋರಾಡಿದ್ದ ಇಕ್ಬಾಲ್ ಅನ್ಸಾರಿಗೆ ರಾಮ ಮಂದಿರದ ಆಹ್ವಾನ!

Prasthutha|

ಅಯೋಧ್ಯೆ: ಅಯೋಧ್ಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಬರಿ ಮಸೀದಿ ಮಸೀದಿಗೆ ಕಾನೂನು ಹೋರಾಟ ಮಾಡಿದ್ದ ಇಕ್ಬಾಲ್ ಅನ್ಸಾರಿ ಅವರನ್ನೂ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಇಕ್ಬಾಲ್ ಅನ್ಸಾರಿ ಕೂಡ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ ಎಂದೂ ವರದಿಯಾಗಿದ್ದೆ.

ಇಕ್ಬಾಲ್ ಅನ್ಸಾರಿ ಅವರ ತಂದೆ ಹಾಶಿಮ್ ಅನ್ಸಾರಿ ರಾಮ ಜನ್ಮಭೂಮಿ ಮಾಲೀಕತ್ವದ ವಿವಾದದ ಪ್ರಮುಖ ಫಿರ್ಯಾದಿಯಾಗಿದ್ದರು.

- Advertisement -

ತಂದೆಯ ಮರಣದ ನಂತರ ಇಕ್ಬಾಲ್ ಅನ್ಸಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಾಬರಿ ಮಸೀದಿಗಾಗಿ ಕಾನೂನು ಹೋರಾಟವನ್ನು ಮುಂದುವರೆಸಿದ್ದರು. ಆದರೆ, 9 ನವೆಂಬರ್ 2019 ರಂದು ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿಯ ಮಾಲೀಕತ್ವವನ್ನು ಹಿಂದೂ ಪಕ್ಷಕ್ಕೆ ಹಸ್ತಾಂತರಿಸಲು ತೀರ್ಪು ನೀಡಿದಾಗ ಇಕ್ಬಾಲ್ ಅನ್ಸಾರಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದರು. ಅಲ್ಲದೆ, ನೂರಾರು ವರ್ಷಗಳ ಈ ವಿವಾದವನ್ನು ಕೊನೆಗೊಳಿಸಿದ್ದಕ್ಕಾಗಿ ಅಭಿನಂದಿಸಿದ್ದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿ ರೋಡ್ ಶೋ ಕೂಡ ಮಾಡಿದಾಗ ಇದೇ ಇಕ್ಬಾಲ್ ಅನ್ಸಾರಿ ಪ್ರಧಾನಿ ಮೋದಿಯ ಮೇಲೆ ಹೂವಿನ ಮಳೆಗರೆದಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಇಕ್ಬಾಲ್ ಅನ್ಸಾರಿ, ಅಯೋಧ್ಯೆಗೆ ಬರುವವರು ನಮ್ಮ ಅತಿಥಿಗಳು. ಅವರಿಗೆ ನಮಸ್ಕಾರ ಮಾಡುವುದು ನಮ್ಮ ಧರ್ಮ ಮತ್ತು ಸಂಪ್ರದಾಯ. ನಮ್ಮ ದೇಶದ ಪ್ರಧಾನಿ ಅಯೋಧ್ಯೆಗೆ ಬಂದಿದ್ದು, ಅವರನ್ನು ಸ್ವಾಗತಿಸಲು ನಾನು ಪುಷ್ಪವೃಷ್ಟಿ ಮಾಡಿದೆ ಎಂದು ಹೇಳಿದ್ದರು.



Join Whatsapp