ಬೆಳಗಾವಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಕೋಪದ ಭರದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮೂಗನ್ನು ಕತ್ತರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಲ್ಯಾಣಿ ಜ್ಯೋತಿಬಾ ಮೋರೆ (44) ಅವರನ್ನು ಕಾಕತಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರದಂದು ಬೆಳಗಾವಿ ಜಿಲ್ಲೆಯ ಬಸುರ್ಟೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಸಂತ್ರಸ್ತೆಯ ಮಕ್ಕಳು ಹಿಂದಿನ ದಿನ ಆರೋಪಿಯ ತೋಟದಿಂದ ಹೂವುಗಳನ್ನು ಕಿತ್ತಿದ್ದರು ಎಂಬ ನೆಪದಲ್ಲಿ ಆಕೆಯ ಮೂಗು ಕತ್ತರಿಸಿದ್ದಾನೆ.