ಮಕ್ಕಳಿಗೆ ಶೂ, ಪುಸ್ತಕ, ಸಮವಸ್ತ್ರ ವಿತರಣೆ ಕಮಿಷನ್‌ಗಾಗಿ: ರಾಜು‌ ಕಾಗೆ

Prasthutha|

ಬೆಳಗಾವಿ: ಸರಕಾರವು ಶಾಲಾ ಮಕ್ಕಳಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಆದರೆ ಮಕ್ಕಳಿಗೆ ಶೂ, ಪುಸ್ತಕಗಳು ಮತ್ತು ಸಮವಸ್ತ್ರ ನೀಡುವುದು ಮುಂತಾದವೆಲ್ಲ ರಾಜಕಾರಣಿಗಳಿಗೆ ಕಮಿಷನ್‌ ಹೊಡೆಯಲು ಬೇಕಾಗಿ ಮಾಡಲಾದ ಯೋಜನೆಗಳು ಎಂದು ಕಾಗವಾಡದ ಶಾಸಕ ರಾಜು ಕಾಗೆ ಹೇಳಿದ್ದಾರೆ.

- Advertisement -

ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ನಡೆದ ಶಾಲೆಯ ವಾರ್ಷಿಕೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೇವೆ. ಮಕ್ಕಳು ದೇಶದ ಭವಿಷ್ಯ ಎನ್ನುತ್ತೇವೆ. ಆದರೆ ಮಕ್ಕಳಿಗೆ ಬಿಸಿಯೂಟ, ಸೈಕಲ್‌, ಶೂ, ಸಮವಸ್ತ್ರ ಹಾಗೂ ಪಠ್ಯಪುಸ್ತಕ ಕೊಡಿ ಎಂದು ಯಾರು ಹೇಳಿದ್ದರು? ಅದಕ್ಕೆ ಯಾರು ಅರ್ಜಿ ಹಾಕಿದ್ದರು? ಅದೆಲ್ಲ ಕೊಡುತ್ತಿರುವುದು ನಮ್ಮ ಕಮಿಷನ್‌ಗಾಗಿ ಎಂದು ಹೇಳಿದರು.

ರಾಜಕಾರಣ ಬಹಳ ಕೆಟ್ಟುಹೋಗಿದೆ. ರಾಜಕಾರಣಿಗಳು ಪವಿತ್ರರಲ್ಲ. ಜಗತ್ತಿನಲ್ಲಿ ಇವತ್ತು ಲೂಟಿಕೋರರು- ದರೋಡೆಕೋರರು ಅಥವಾ ಕಳ್ಳರು ಇದ್ದರೆ ಅದು ರಾಜಕಾರಣಿಗಳು. ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಹೇಳಿದ ರಾಜು ಕಾಗೆ, ಬಡ ಮಕ್ಕಳಿಗಾಗಿರುವ‌ ಕೆಲವು ಯೋಜನೆಯನ್ನು ಕೆಟ್ಟ ಉದ್ದೇಶದ್ದು ಎಂದು ಹೇಳಿದ್ದಾರೆ.

- Advertisement -



Join Whatsapp