ಪಾಕಿಸ್ತಾನ: ಜೈಲ್‌ನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಬಂಧನಕ್ಕೊಳಗಾದ ಮಾಜಿ ಸಚಿವ ಖುರೇಷಿ

Prasthutha|

ಲಾಹೋರ್‌: ರಾಜತಾಂತ್ರಿಕ ದಾಖಲೆಗಳನ್ನು ಅನಧಿಕೃತವಾಗಿ ಪ್ರದರ್ಶಿಸಿದ ಪ್ರಕರಣದಲ್ಲಿ ಕಳೆದ ವಾರ ಪಾಕಿಸ್ತಾನ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಬಿಡುಗಡೆಯಾಗಿದ್ದರು. ಆಗಲೇ ಅಡಿಯಾಲ ಜೈಲಿನ ಹೊರಗಡೆ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ.

- Advertisement -

ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ ಕಾಯ್ದೆಯ ಅನ್ವಯ 15 ದಿನಗಳ ಬಂಧನಕ್ಕೆ ರಾವಲ್ಪಿಂಡಿ ಜಿಲ್ಲಾಧಿಕಾರಿ ಹಸನ್‌ ವಾಕರ್‌ ಚೀಮಾ ಆದೇಶದ ಮೇರೆಗೆ ಈ ಬಂಧನ‌ ನಡೆದಿದೆ. ಈ ವೇಳೆ 67 ವರ್ಷದ ಖುರೇಷಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಖುರೇಷಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರಮಾಪ್ತರಾಗಿದ್ದಾರೆ. ಎರಡು ಬಾರಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದರು.



Join Whatsapp