ಕಲ್ಲಡ್ಕ ಪ್ರಭಾಕರ್ ಭಟ್ಟರ ಹೀನ ಮನಸ್ಥಿತಿಯನ್ನು ಮಾನವ ಸಮಾಜ ಸಹಿಸಲು ಸಾಧ್ಯವಿಲ್ಲ: ಇನಾಯತ್ ಅಲಿ

Prasthutha|


ಮಂಗಳೂರು: ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ವೇಳೆ ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ್ ಭಟ್ಟರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಹೇಳಿದರು.

- Advertisement -

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ ಎನ್ನುತ್ತದೆ ಹಿಂದೂ ಸಂಸ್ಕೃತಿ. ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವರಿರುತ್ತಾನೆ ಎಂಬುದು ಇದರ ತಾತ್ಪರ್ಯ. ಪ್ರಭಾಕರ್ ಭಟ್ಟರು ಹೃದಯದಿಂದ ಹಿಂದೂ ಆಗಿದ್ದರೆ ಮಹಿಳೆಯರನ್ನು ನಿಂದಿಸುವಂತಹ ನೀಚ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಹಾಗಾಗಿ ಇದು ಲೋಕಸಭಾ ಚುನಾವಣೆಗೆ ಇಟ್ಟಿರುವ ವಿಷಕಾರಿ ಅಡಿಗಲ್ಲಾಗಿದೆ ಎಂದರು.

ಮಹಿಳೆ ಎನ್ನುವ ಕಾರಣಕ್ಕೆ ಭೋಗದ ವಸ್ತುವಾಗಿ ನೋಡುವ ಪ್ರಭಾಕರ್ ಭಟ್ಟರ ಹೀನ ಮನಸ್ಥಿತಿಯನ್ನು ಮಾನವ ಸಮಾಜ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಸದಾ ಸಂಸ್ಕೃತಿಯ ಬಗ್ಗೆ ಉಪದೇಶಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ಅತ್ಯಂತ ಹೀನವಾಗಿ ಹೋಲಿಸುವುದನ್ನ ಸಂಘ ಒಪ್ಪುತ್ತದೆಯೇ? ಅಮಾಯಕ ತಾಯಂದಿರ ಶಾಪ ಇವರಿಗೆ ತಾಗದೇ ಇರದು ಎಂದು ಮಾರ್ಮಿಕವಾಗಿ ನುಡಿದರು.



Join Whatsapp