ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ

Prasthutha|

ಚಂಡೀಗಢ: ಝಜ್ಜರ್ ಜಿಲ್ಲೆಯ ಛರಾ ಗ್ರಾಮದ ಕುಸ್ತಿ ಅಖಾಡಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಜರಂಗ್ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದರು.

- Advertisement -

ಛಾರಾ ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮ. ದೀಪಕ್ ಮತ್ತು ಬಜರಂಗ್ ವೀರೇಂದ್ರ ಅಖಾಡದಿಂದ ತಮ್ಮ ಕುಸ್ತಿ ವೃತ್ತಿಯನ್ನು ಪ್ರಾರಂಭಿಸಿದರು. ಇಲ್ಲಿ ರಾಹುಲ್ ಅವರ ಚಿತ್ರವೂ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ಕುಸ್ತಿಪಟುಗಳೊಂದಿಗೆ ಕುಳಿತಿರುವುದನ್ನು ಕಾಣಬಹುದು. ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಕುರಿತು ವಿವಾದ ನಡೆಯುತ್ತಿರುವ ಸಂದರ್ಭದಲ್ಲಿ ರಾಹುಲ್ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ.



Join Whatsapp