ಕಲ್ಲಡ್ಕ ಭಟ್ ಹೇಳಿಕೆ | ಮುಸ್ಲಿಮರಿಗೆ ಮಾತ್ರವಲ್ಲ, ಇಡೀ ಹೆಣ್ಣು ಸಮಾಜಕ್ಕೆ ಮಾಡಿದ ಅವಮಾನ: ಯು.ಟಿ ಫರ್ಝಾನಾ

Prasthutha|

ಮಂಗಳೂರು: ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಕಲ್ಲಡ್ಕ ಭಟ್ ಹಿಂದೂ ಸಮಾಜದ ನಾಯಕ ಎನಿಸಿಕೊಳ್ಳಲು ಅರ್ಹತೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರೆ ಯು.ಟಿ ಫರ್ಝಾನಾ ಹೇಳಿದ್ದಾರೆ.

- Advertisement -

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತನ್ನದಲ್ಲವನ್ನು ಎಲ್ಲವನ್ನೂ ಟೀಕಿಸುವ ವ್ಯಕ್ತಿ ಕಲ್ಲಡ್ಕ ಭಟ್ ತನ್ನದಲ್ಲದನ್ನು ಎಲ್ಲವನ್ನೂ ಅವತು ಕೆಡವಲು ಪ್ರಯತ್ನಿಸುತ್ತಾರೆ. ಈ ಹಿಂದೆ ದೈವ ನರ್ತಕರನ್ನೂ ಕಲ್ಲಡ್ಕ ಭಟ್ ಹೀಯಾಳಿಸಿದ್ದಾರೆ ಎಂದರು. ಕಲ್ಲಡ್ಕ ಭಟ್ ಅವರಂಥ ನಾಯಕರು ಹಿಂದೂ ಸಮಾಜದ ನಾಯಕ ಎನಿಸಿಕೊಳ್ಳಲು ಅರ್ಹತೆ ಇಲ್ಲ. ಸಂಸ್ಕಾರವಂತರು ಎಂದು ಹೇಳಿಕೊಳ್ಳುವ ಆರ್ ಎಸ್ ಎಸ್ ನವರು ಕಲ್ಲಡ್ಕ ಭಟ್ ಅವರನ್ನು ಯಾಕೆ ಇಟ್ಟುಕೊಂಡಿದ್ದಾರೆ. ಕಲ್ಲಡ್ಕ ಭಟ್ ಹೇಳಿಕೆಗೆ ಪ್ರತಿ ಹೇಳಿಕೆ ಕೊಡಲು ನಮಗೆ ಅಸಹ್ಯ ಆಗುತ್ತೆ. ಇದು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಾತ್ರ ಅವಮಾನವಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡುವ ಹೇಳಿಕೆ ಎಂದರು. ಭಟ್ ಹೇಳಿಕೆ ಕೀಳುಮಟ್ಟದ ಪುರುಷಾಧಿಪತ್ಯದ ಹೇಳಿಕೆ ಇಂತಹ ಕೀಳುಮಟ್ಟದ ವ್ಯಕ್ತಿಗಳನ್ನು ಜನರು ದೂರ ಇಡಬೇಕು ಎಂದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಿಜೆಪಿ ಮತ್ತು ಆರ್ ಎಸ್ ಎಸ್ ನಲ್ಲಿ ಯಾವುದೇ ಮನ್ನಣೆ ಇಲ್ಲ, ಅದಕ್ಕಾಗಿ ಜನರ ಗಮನ ಸೆಳೆಯಲು ಕಲ್ಲಡ್ಕ ಭಟ್ ಈ ರೀತಿ ಅಶ್ಲೀಲ ಹೇಳಿಕೆ ನೀಡುತ್ತಿದ್ದಾರೆ ಎಂದರು.

- Advertisement -

ಹಿಜಾಬ್ ಬಗ್ಗೆ ಸಿಎಂ ಯೂಟರ್ನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ಕಾರ್ಯಕ್ರಮದಲ್ಲಿ ಹೃದಯದಿಂದ ಮಾತನಾಡಿದ್ದಾರೆ. ವಿವಾದ ಕೋರ್ಟ್‌ ನಲ್ಲಿ ಇರುವುದರಿಂದ ಸಿಎಂ ಅವರು ಮರುದಿನ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಯೂಟರ್ನ್ ಹೊಡೆದಿಲ್ಲ.  ಅವರ ಮನಸ್ಸಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಸಹಾಯ ಮಾಡುವ ಹಂಬಲ ಇದೆ ಎಂದರು.

ಇನ್ನು ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ ಮಾತನಾಡಿ, ಕಲ್ಲಡ್ಕ ಭಟ್ ಹೇಳಿಕೆಯನ್ನು ಮಹಿಳಾ ಸಮುದಾಯ ಖಂಡಿಸುತ್ತದೆ. ಭಾರತದಲ್ಲಿ ಮಹಿಳೆಯರಿಗೆ ಪವಿತ್ರ ಸ್ಥಾನವಿದೆ, ಎಲ್ಲಾ ಜಾತಿಮತ ಮಹಿಳೆಯರಿಗೂ ಗೌರವ ಇದೆ. ಮಹಿಳೆ ಗೌರವ ಸ್ಥಾನದಲ್ಲಿ ನಿಂತು ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಾಳೆ. ಆರ್ ಎಸ್ ಎಸ್ ನವರು ಸಂಸ್ಕೃತಿ ಹಿಂದೂ ಧರ್ಮ, ಎಲ್ಲರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಾರೆ, ಆದರೆ ಅದರಂತೆ ಅವರು ನಡೆಯುವುದಿಲ್ಲ ಕಲ್ಲಡ್ಕ ಭಟ್ ವಿರುದ್ಧ ಕಠಿಣ ಕಾನೂನು ಕ್ರ‌ಮ ತೆಗೆದುಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಶಬೀರ್ ಎಸ್, ಗಣೇಶ್ ಪೂಜಾರಿ, ಹಿಂದುಳಿದ ವರ್ಗದ ಮುಖಂಡ ಶಾಂತಲಾ ಗಟ್ಟಿ, ಮಹಿಳಾ ಕಾಂಗ್ರೆಸ್ ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷೆ ಮುಂತಾದವರು ಹಾಜರಿದ್ದರು.



Join Whatsapp