ರಾಜ್ಯದಲ್ಲಿ 34 JN.1 ಸೋಂಕಿತ ಪ್ರಕರಣಗಳು ಪತ್ತೆ

Prasthutha|

►ಎಲ್ಲರೂ ಮಾಸ್ಕ್‌ ಹಾಕೋದು ಉತ್ತಮ ಎಂದ ದಿನೇಶ್‌ ಗುಂಡೂರಾವ್‌

- Advertisement -

ಬೆಂಗಳೂರು: ಒಮೆಕ್ರಾನ್ ವೈರಾಣು ಉಪತಳಿ ಜೆಎಸ್‌.1 ರಾಜ್ಯದಲ್ಲಿ ಪತ್ತೆಯಾಗಿದೆ. ಸುಮಾರು 34 ಕೋವಿಡ್ ಸೊಂಕಿತರಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಜೆಎನ್‌.1 ವೈರಾಣು ರಾಜ್ಯದಲ್ಲಿ ಇರಬಹುದು ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ, ಅದು ಜಿನೋಮೊ ಸಿಕ್ವೆನ್ಸಿಂಗ್‌ ನಲ್ಲೇ ನಮಗೆ ಸ್ಪಷ್ಟವಾಗಿ ಗೊತ್ತಾಗೊದು. ಹೀಗಾಗಿ ಜಿನೋಮೊ ಸಿಕ್ವೆನ್ಸಿಂಗ್ ಗೆ ಕಳಿಸಿದ್ವಿ.‌ ಇದೀಗ ವರದಿ ಬಂದಿದ್ದು, ರಾಜ್ಯದಲ್ಲಿ 34 ಪ್ರಕರಣಗಳು ಪತ್ತೆಯಾಗಿದೆ ಎಂದರು. ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಸಮಿತಿ ಸಭೆ ಡಿಸೆಂಬರ್‌ 26ಕ್ಕೆ ನಡೆಯಲಿದೆ. ಸಭೆಯಲ್ಲಿ ಜೆ.ಎನ್ 1 ಪ್ರಕರಣಗಳು ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು.‌ ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರು ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಸಲಹೆ ಎಂದು ಹೇಳಿದ್ದಾರೆ.



Join Whatsapp