ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿಟಿ ರವಿ

Prasthutha|

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಮಾಜಿ ಶಾಸಕ ಸಿ.ಟಿ.ರವಿ, ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಮತ್ತಿತರರು ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದ್ದಾರೆ. ನಾರಾಯಣ ಪರುರ ಬಡಾವಣೆಯ ಮನೆಗಳಿಗೆ ಭಿಕ್ಷೆಗೆ ತೆರಳಿದ ಮಾಲಾಧಾರಿಗಳ ಪಾದ ತೊಳೆದ ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಇನ್ನಿತರ ಪದಾರ್ಥಗಳನ್ನು ಪಡಿ ರೂಪದಲ್ಲಿ ನೀಡಿದ್ದಾರೆ. ದತ್ತ ಜಯಂತಿ ಹಿನ್ನೆಲೆ ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಆರ್.ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಶಾಸಕರು, ಬಿಜೆಪಿ ಮುಖಂಡರ ಜೊತೆ ಇಂದು ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.



Join Whatsapp