1000ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ ಪೇಟಿಎಂ

Prasthutha|

ನವದೆಹಲಿ: ಪೇಟಿಎಂ ನ ಮಾತೃಸಂಸ್ಥೆಯಾಗಿರುವ ಒನ್‌ 97 ಕಮ್ಯುನಿಕೇಶನ್ಸ್‌ ಇತ್ತೀಚೆಗೆ 1000ಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟಿದೆ.

- Advertisement -

ಪೇಟಿಎಂನ ಒಟ್ಟು ಉದ್ಯೋಗಿಗಳ ಪೈಕಿ ಶೇ 10ರಷ್ಟು ಮಂದಿಯನ್ನು ಈ ಲೇಆಫ್‌ ಬಾಧಿಸಿದೆ. ಭದ್ರತೆಯಿಲ್ಲದ ಸಾಲಗಳ ಮೇಲೆ ಆರ್‌ ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ಗ್ರಾಹಕರಿಗೆ ಸಣ್ಣ ಸಾಲ ನೀಡಿಕೆ ಮತ್ತು ಈಗ ಖರೀದಿಸಿ ನಂತರ ಪಾವತಿಸಿ ವಿಭಾಗಗಳಿಂದ ಹಿಂದೆ ಸರಿದ ನಂತರದ ಬೆಳವಣಿಗೆ ಇದಾಗಿದೆ.

ವೆಚ್ಚಗಳ ಕಡಿತ ಹಾಗೂ ವಿವಿಧ ವ್ಯವಹಾರಗಳ ಮರುಒಗ್ಗೂಡಿಸುವಿಕೆಯ ಉದ್ದೇಶದೊಂದಿಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.



Join Whatsapp