ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ: ಯುಪಿ ಉಸ್ತುವಾರಿಯಿಂದ ಪ್ರಿಯಾಂಕ ಔಟ್

Prasthutha|

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರ ಪ್ರದೇಶದ ಉಸ್ತುವಾರಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಛತ್ತೀಸ್‌ಗಢದ ಉಸ್ತುವಾರಿಯಾಗಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್‌ ಪೈಲಟ್‌ ಅವರನ್ನು‌ ಖರ್ಗೆ ನೇಮಕ ಮಾಡಿದ್ದಾರೆ. 12 ಪ್ರಧಾನ ಕಾರ್ಯದರ್ಶಿಗಳ ಜೊತೆಗೆ 11 ರಾಜ್ಯ ಉಸ್ತುವಾರಿಗಳನ್ನೂ ನೇಮಿಸಲಾಗಿದೆ.

- Advertisement -

ಪ್ರಿಯಾಂಕಾ ಗಾಂಧಿ ಬದಲಿಗೆ ಜಾರ್ಖಂಡ್ ಉಸ್ತುವಾರಿಯಾಗಿದ್ದ ಅವಿನಾಶ್ ಪಾಂಡೆ ಅವರನ್ನು ಉತ್ತರಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕಳೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಸಬಲೀಕರಣವನ್ನು ಮುಖ್ಯ ವಿಚಾರವಾಗಿ ಪ್ರಚಾರವನ್ನು ನಡೆಸಿದರೂ ಯಶಸ್ಸು ಕಾಣದ ಪ್ರಿಯಾಂಕ ಗಾಂಧಿ ಬಳಿಕ ಉತ್ತರಪ್ರದೇಶದಲ್ಲಿ ಉಸ್ತುವಾರಿಯಾಗಿ ಮುಂದುವರಿಯಲು ಉತ್ಸುಕತೆ ತೋರಲಿಲ್ಲ ಎನ್ನಲಾಗಿದೆ.

ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ನೇತೃತ್ವದ ಪ್ರಣಾಳಿಕೆ ಸಮಿತಿಯನ್ನು ಪಕ್ಷವು ನೇಮಿಸಿದ ಒಂದು ದಿನದ ನಂತರ ಈ ನೇಮಕಾತಿಗಳು ನಡೆದಿವೆ.

- Advertisement -



Join Whatsapp