ಗಂಗಾವತಿ: ಅಯೋದ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ ಅಂಜನಾದ್ರಿ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರನ್ನು 108 ಲೋಹದ ಕುಂಭದೊಂದಿಗೆ ತೆಗೆದುಕೊಂಡು ಹೋಗಿ ಶ್ರೀರಾಮಚಂದ್ರ ದೇವರಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಹನುಮದ್ ವೃತ ಅಂಗವಾಗಿ ಏರ್ಪಡಿಸಿದ್ದ ಹನಮಮಾಲಾಧಾರಿಗಳ ಸಂಕೀರ್ತನೆ ಯಾತ್ರೆಯಲ್ಲಿ ಪಾಲ್ಗೊಂಡ ಜನಾರ್ದನ ರೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದರು. ಜ. 22 ರಂದು ನಡೆಯುವ ಅಯೋಧ್ಯೆ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶ್ರೀರಾಮಚಂದ್ರ ದೇವರ ಶಿಷ್ಯನಾಗಿರುವ ಅಂಜನಾದ್ರಿ ಹನುಮಂತ ದೇವರ ಸನ್ನಿದಾನದಲ್ಲಿ ತುಂಗಭದ್ರ ಹರಿಯುತ್ತಿದೆ. ಇಲ್ಲಿಯ ಜಲವನ್ನು ಲೋಹದ 108 ಕುಂಭದೊಂದಿಗೆ ತೆರೆಳಿ ಅಭಿಷೇಕ ಮಾಡಲಾಗುತ್ತದೆ. ಸ್ವತಃ ತಾವೇ ಭಾಗಿಯಾಗವುದಾಗಿ ತಿಳಿಸಿದರು.