ನವದೆಹಲಿ: 2024ರ ಜನವರಿ ಎರಡನೇ ವಾರದಿಂದ ಭಾರತ್ ಜೋಡೋ ಯಾತ್ರಾ ಭಾಗ-2ನ್ನು ರಾಹುಲ್ ಗಾಂಧಿ ಪ್ರಾರಂಭಿಸಲಿದ್ದಾರೆ. ಯಾತ್ರೆ ಅರುಣಾಚಲ ಪ್ರದೇಶದಿಂದ ಗುಜರಾತ್’ಗೆ ಪ್ರಯಾಣಿಸಲಿದೆ.
CWC ಸಭೆಯಲ್ಲಿ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಪ್ರದರ್ಶನ ನೀಡಿದ ನಂತರ 2024 ರಲ್ಲಿ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ.
ಯಾತ್ರೆಯ ಮೊದಲ ಭಾಗವು ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ 12 ರಾಜ್ಯಗಳ ಮೂಲಕ ಹಾದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಂಡಿತು – ಸುಮಾರು 136 ದಿನಗಳ ಅವಧಿಯಲ್ಲಿ 4000 ಕಿಲೋಮೀಟರ್ ದೂರವನ್ನು ಕ್ರಮಿಸಿತ್ತು.