2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳಕೊಳ್ಳುವತ್ತ ಟ್ರಂಪ್

Prasthutha|

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರೀ ಮುಖಭಂಗವಾಗಿದ್ದು, ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹರೆಂದು ಕೊಲೊರಾಡೋ ನ್ಯಾಯಾಲಯ ಇತ್ತೀಚೆಗೆ ಘೋಷಿಸಿದೆ. ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಮತದಾನದಿಂದ ಅವರ ಹೆಸರನ್ನು ಹೊರಗಿಡಲು ರಾಜ್ಯ ಕಾರ್ಯದರ್ಶಿಗೆ ನ್ಯಾಯಾಲಯ ಆದೇಶಿಸಿದೆ.

- Advertisement -

ಕ್ಯಾಪಿಟಲ್ ಹಿಂಸಾಚಾರ ಪ್ರಕರಣದಲ್ಲಿ ಟ್ರಂಪ್‌ಗೆ ಈ ಹಿನ್ನೆಡೆಯಾಗಿದೆ. ಕೊಲೊರಾಡೋ ಹೈಕೋರ್ಟ್ ತನ್ನ 4-3 ಬಹುಮತದ ತೀರ್ಪಿನಲ್ಲಿ, 14 ನೇ ತಿದ್ದುಪಡಿಯ ಸೆಕ್ಷನ್ 3 ರ ಅಡಿಯಲ್ಲಿ ಟ್ರಂಪ್ ಅಧ್ಯಕ್ಷ ಹುದ್ದೆಯನ್ನು ಹೊಂದಲು ಅನರ್ಹರಾಗಿದ್ದಾರೆ ಎಂದು ಹೇಳಿದೆ. ಯುಎಸ್ ಸಂವಿಧಾನದ ಹದಿನಾಲ್ಕನೇ ತಿದ್ದುಪಡಿಯ ಸೆಕ್ಷನ್ 3 ರ ಪ್ರಕಾರ ಟ್ರಂಪ್ ಅಧ್ಯಕ್ಷ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದೆ. ಈ ಆದೇಶವು ಕೊಲೊರಾಡೋ ರಾಜ್ಯದಲ್ಲಿ ಮಾತ್ರ ಅನ್ವಯವಾಗಿದ್ದರೂ, ನಿರ್ಧಾರವನ್ನು ಇನ್ನೂ ಮೇಲ್ಮನವಿ ಸಲ್ಲಿಸದ ಕಾರಣ ಮುಂದಿನ ತಿಂಗಳ 4 ರವರೆಗೆ ನಿರ್ಧಾರವನ್ನು ತಡೆಹಿಡಿಯಲಾಗಿದೆ. ಕೊಲೊರಾಡೋ ಸುಪ್ರೀಂ ಕೋರ್ಟ್‌ನ ತೀರ್ಪು ಕೊಲೊರಾಡೋಗೆ ಮಾತ್ರ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಆದರೆ ಐತಿಹಾಸಿಕ ನಿರ್ಧಾರವು 2024 ರ ಅಧ್ಯಕ್ಷೀಯ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.



Join Whatsapp