ಲೋಕಸಭೆಯಿಂದ ಮತ್ತೆ ಇಬ್ಬರು ಸಂಸದರ ಅಮಾನತು: ಸಸ್ಪೆಂಡ್ ಸಂಖ್ಯೆ 143ಕ್ಕೆ ಏರಿಕೆ

Prasthutha|

ನವದೆಹಲಿ: ಸದನದಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಲೋಕಸಭೆಯ ಇಬ್ಬರು ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಬುಧವಾರ ಅಮಾನತು ಮಾಡಿದ್ದಾರೆ.

- Advertisement -

ಕೇರಳದ ಥಾಮಸ್ ಚಾಜಿಕಾಡನ್ ಮತ್ತು ಎಎಮ್ ಆರಿಫ್ ಅಮಾನತಾದ ಸಂಸದರು. ಪ್ಲೇಕಾರ್ಡ್ ಗಳನ್ನು ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ್ದಕ್ಕಾಗಿ ಈ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.

ಚಳಿಗಾಲದ ಅಧಿವೇಶನ ಶುಕ್ರವಾರ (ಡಿಸೆಂಬರ್ 22)ದಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಒಟ್ಟು 143 ಮಂದಿ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ.



Join Whatsapp