ದೆಹಲಿ: ನಾವು ಜಾಗರೂಕರಾಗಿರಬೇಕು, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಹೇಳಿದ್ದಾರೆ.
ದೇಶದಲ್ಲಿನ ಕೊರೊನಾ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರಕರಣಗಳ ಬಗ್ಗೆ ಕಣ್ಗಾವಲು ಮತ್ತು ಜನರೊಂದಿಗೆ ಸಂವಹನವನ್ನು ಹೆಚ್ಚಿಸಲು ಅವರು ಕೇಳಿಕೊಂಡರು. ಪರಸ್ಪರ ನಿಕಟವಾಗಿ ಕೆಲಸ ಮಾಡುವ ಮೂಲಕ ‘ಸಂಪೂರ್ಣ ಸರ್ಕಾರ’ ವಿಧಾನದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಮಯ ಇದು. ನಾವು ಜಾಗರೂಕರಾಗಿರಬೇಕು, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.