ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಮಾಡುತ್ತಿರುವ ಯುದ್ಧಕ್ಕೆ ಎರಡು ವರ್ಷ ಸಮೀಪಿಸುತ್ತಾ ಇದೆ. ಈ ಮಧ್ಯೆ ರಷ್ಯಾ ರಾಜಧಾನಿ ಮೇಲೆ ಉಕ್ರೇನ್ ಹಾರಿಸಿದ ಹತ್ತಾರು ಡ್ರೋನ್ಗಳು ಅಬ್ಬರಿಸಿವೆ ಎನ್ನಲಾಗಿದೆ.
ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಕಳೆದ 1 ವರ್ಷಗಳಿಂದ ನಿರಂತರವಾಗಿ ದಾಳಿ ನಡೆಯಲು ಯತ್ನಿಸುತ್ತಿದೆ ಎಂಬ ಆರೋಪ ಇದ್ದು, ಇದಕ್ಕೆ ಬಲ ನೀಡುವಂತೆ ಈ ಘಟನೆ ವರದಿಯಾಗಿದೆ.
ರಷ್ಯಾ ರಾಜಧಾನಿ ಹಾಗೂ ಜಗತ್ತಿನ ಅತಿ ದುಬಾರಿ ನಗರಗಳ ಪೈಕಿ ಒಂದು ಎನ್ನಲಾಗಿರುವ ಮಾಸ್ಕೋ ಮೇಲೆ, ಉಕ್ರೇನ್ ಹಾರಿಸಿದ್ದ ಡ್ರೋನ್ಗಳನ್ನು ಪುಡಿ ಪುಡಿ ಮಾಡಿರುವುದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿಯ ನೀಡಿದೆ. ಈ ಮೂಲಕ ಇಬ್ಬರ ನಡುವೆ ತಿಕ್ಕಾಟ ಮತ್ತಷ್ಟು ಹೆಚ್ಚಾಗಿದೆ.