ಅಡ್ವಾಣಿ, ಜೋಶಿಯವರನ್ನು ರಾಮಮಂದಿರ ಲೋಕಾರ್ಪಣೆಗೆ ದೂರವಿಟ್ಟಿದ್ದು ಸರಿಯಲ್ಲ: ಜಗದೀಶ್ ಶೆಟ್ಟರ್

Prasthutha|

ಹುಬ್ಬಳ್ಳಿ: ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಕಡೆಗಣನೆ ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

- Advertisement -

ನಗರದಲ್ಲಿಂದು ಮಾತನಾಡಿದ ಅವರು, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ವಯಸ್ಸಿನ ಕಾರಣ ಹೇಳಿ ರಾಮಮಂದಿರ ಲೋಕಾರ್ಪಣೆಗೆ ದೂರವಿಟ್ಟಿದ್ದು ಸರಿಯಲ್ಲ. ರಾಮಮಂದಿರದ ಬಗ್ಗೆ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಿದ್ದು, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ. ಈ ಸಮಯದಲ್ಲಿ ಇವರ ಉಪಸ್ಥಿತಿ ಬಹಳಷ್ಟು ಪ್ರಮುಖ. ಇವರನ್ನು ನಿರ್ಲಕ್ಷ್ಯ ಮಾಡಿದ್ದು, ದೂರ ಇಟ್ಟಿದ್ದು ಸರಿಯಲ್ಲ. ಅದರಲ್ಲೂ ವಯಸ್ಸಿನ ನೆಪ ಹೇಳಿ ಈಗಾಗಲೇ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಲಾಗಿದೆ. ಹೊಸದಾಗಿ ಮೂಲೆಗುಂಪು ಮಾಡೋದು ಏನಿದೆ? ಎಂದರು.



Join Whatsapp