ಆದಿವಾಸಿ ಗಾಯಕನನ್ನು ಥಳಿಸಿ ಹತ್ಯೆ

Prasthutha|

ರಾಂಚಿ: ಜಾರ್ಖಂಡ್‌ನ‌ಲ್ಲಿ ಆದಿವಾಸಿ ಗಾಯಕನನ್ನು ಬಡಿಗೆಯಿಂದ ಬಡಿದು ಹತ್ಯೆ ಮಾಡಲಾಗಿದೆ. ಡೇವಿಡ್‌ ಮಿಂಜ್‌(35) ಕೊಲೆಯಾದ ಗಾಯಕ.
ಬುದ್ಧಿಮಾಂದ್ಯ ಬಾಲಕಿಗೆ ಕಿರುಕುಳ ನೀಡಿದ ಆಪಾದನೆ ಮೇರೆಗೆ ಈ ಹತ್ಯೆ ನಡೆದಿದೆ.

- Advertisement -

ರಾಂಚಿ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಗಾಯಕ
ಡೇವಿಡ್‌ ಮಿಂಜ್‌ ನಾಗ್ಪುರಿ ಭಾಷೆಯಲ್ಲಿ ಹಲವಾರು ಗೀತೆಗಳನ್ನು ಹಾಡಿದ್ದು, ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಈ ಹಾಡುಗಳು ಜನಪ್ರಿಯವಾಗಿವೆ.

ಘಟನೆಗೆ ಬಾಲಕಿಯ ಮನೆಯವರು ಸೇರಿದಂತೆ ಮೂರು ಕುಟುಂಬಗಳು ಕಾರಣವಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.



Join Whatsapp