ಸಂಸದ ಪ್ರತಾಪ್ ಸಿಂಹ ದೇಶದ್ರೋಹಿ: ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್

Prasthutha|

ಮೈಸೂರು: ಸಂಸತ್ತಿನ ಭದ್ರತೆಯಲ್ಲಿ ಲೋಪ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿಕೊರರಿಗೆ ಪಾಸ್ ನೀಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ.

- Advertisement -

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೈಸೂರಿನ ಮಹಾರಾಜ ವೃತ್ತದ ಬಳಿ ಫ್ಲೆಕ್ಸ್ ಅಳವಡಿಸಿದ್ದು, ಪ್ರತಾಪ್ ಸಿಂಹ ದೇಶದ್ರೋಹಿ ಎಂದು ಬರೆಯಲಾಗಿದೆ. ಫ್ಲೆಕ್ಸ್ ನಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದು ನಿಂತಿರುವ ರೀತಿಯ ತಿರುಚಿದ ಫೋಟೋವನ್ನು ಅಳವಡಿಸಲಾಗಿದೆ. ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ.



Join Whatsapp