ಪ್ರತಾಪ್​ ಮಹಾ ದೇಶಭಕ್ತ: ಈಶ್ವರಪ್ಪ

Prasthutha|

ಬೆಂಗಳೂರು: ನೂತನ ಸಂಸತ್​ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ಕೊಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ, ಈಶ್ವರಪ್ಪ ಪ್ರತಾಪ್​ ಸಿಂಹ ಮಹಾ ದೇಶಭಕ್ತ. ಅಂತಹವರನ್ನು ಶಂಕಿಸುವುದು ಕಾಂಗ್ರೆಸ್​ಗೆ ಮಾತ್ರ ಸಾಧ್ಯ ಎಂದು ಕಿಡಿ ಕಾರಿದ್ದಾರೆ.

- Advertisement -

ಭಾರೀ ಭದ್ರತೆಯ ಹೊರತಾಗಿಯೂ ಕಿಡಿಗೇಡಿಗಳು ಸಂಸತತ್‌ ಒಳಗೆ ನುಗ್ಗಿದ್ದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿಯಾಗಿದೆ ಎಂದ ಈಶ್ವರಪ್ಪ, ಈ ಸಂಬಂಧ ಸಂಸದ ಪ್ರತಾಪ್ ಸಿಂಹಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ.

ಬಂಧಿತ ಆರೋಪಿಗಳಿಗೆ ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ಪಾಸ್​ ಪಡೆದಿರುವ ಬಗ್ಗೆ ಕೇಳಿದಾಗ, ಅಚಾತುರತ್ಯ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ವೇಳೆ ವ್ಯಕ್ತಿಯೊಬ್ಬರು ಶಾಸಕರ ಆಸನದಲ್ಲಿ ಬಂದು ಕುಳಿತಿದ್ದರು ಅದು ಭದ್ರತಾ ಲೋಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.

- Advertisement -

ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್​ ನಾಯಕರು ತನಿಖೆಗೆ ಆಗ್ರಹಿಸಿದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರಿಗೆ ಮಾಡಲು ಬೇರೆ ಉದ್ಯೋಗವಿಲ್ಲ, ಪ್ರತಾಪ್ ಸಿಂಹನಂಥ ದೇಶಭಕ್ತ ಮತ್ತು ಹಿಂದೂತ್ವವಾದಿಯ ಮೇಲೆ ಶಂಕೆ ಪಡೋದು, ಖಂಡಿಸೋದು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp