ಭೋಪಾಲ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಬುಲ್ಡೋಝರ್ ಸಂಸ್ಕೃತಿಯನ್ನು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಅಧಿಕಾರ ವಹಿಸಿದ ಮರುದಿನವೇ ರಾಜ್ಯಕ್ಕೆ ತಂದಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುರುವ ಮೋಹನ ಯಾದವ್ ಬಿಜೆಪಿ ಕಾರ್ಯಕರ್ತ ದೇವೇಂದ್ರ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮನೆಯ ಮೇಲೆ ಬುಲ್ಡೋಜರ್ ಕ್ರಮಕ್ಕೆ ಆದೇಶಿಸಿದ್ದಾರೆ. ಆರೋಪಿನ ಮನೆ ನೆಲಸಮವಾಗಿದೆ.
ಸರಕಾರದ ಆದೇಸದಿಂದ ಮನೆ ಕಳಕೊಂಡ ವ್ಯಕ್ತಿಯನ್ನು ಫಾರೂಖ್ ರೈನ್ ಎಂದು ಗುರುತಿಸಲಾಗಿದೆ. ಈತ ಹಲ್ಲೆ ನಡೆಸಿದ್ದರಿಂದ ಬಿಜೆಪಿ ಕಾರ್ಯಕರ್ತನ ದೇವೇಂದ್ರ ಠಾಕೂರ್ ಅವರ ಕೈ ತುಂಡಾಗಿದೆ ಎಂದು ಆರೋಪಿಸಲಾಗಿದೆ.
ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು ಎನ್ನಲಾಗಿದ್ದು, ಡಿಸೆಂಬರ್ 3 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಠಾಕೂರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣದ ಇತರ ಆರೋಪಿಗಳಾದ ಅಸ್ಲಾಂ, ಶಾರುಖ್, ಬಿಲಾಲ್ ಮತ್ತು ಸಮೀರ್ ಪೊಲೀಸ್ ಬಂಧನದಲ್ಲಿದ್ದಾರೆ.
ಮಿನ್ನಿ ಎಂದು ಕರೆಯಲ್ಪಡುವ ಆರೋಪಿ ಫಾರೂಖ್ ರೈನ್ ಮನೆ ಕೆಡವಲು ಗುರುವಾರ ಮಧ್ಯಪ್ರದೇಶದ ಅಧಿಕಾರಿಗಳು ಆದೇಶಿಸಿದ್ದು, ಮನೆ ನೆಲಸಮವಾಗಿದೆ ಎಂದು ವರದಿಯಾಗಿದೆ.