ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ: ಬಿಕೆ ಹರಿಪ್ರಸಾದ್

Prasthutha|

- Advertisement -

ಬೆಳಗಾವಿ: ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯದ ಹೊಣೆಯನ್ನು ವಿಶ್ವಗುರು ಪ್ರಧಾನಿ ಮೋದಿ ಹೊರಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಸುವರ್ಣ ಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನು ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರುತ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ್ಣ ಬಳಿದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ ಎಂದು ಕಿಡಿಕಾರಿದರು.



Join Whatsapp