ಕಾಂಗ್ರೆಸ್’ನ ಐವರು ​ಸಂಸದರು ಲೋಕಸಭೆಯಿಂದ ಅಮಾನತು

Prasthutha|

ನವದೆಹಲಿ: ಲೋಕಸಭೆಯಿಂದ ಐವರು ಕಾಂಗ್ರೆಸ್​ ಸಂಸದರನ್ನು ಅಮಾನತುಗೊಳಿಸಲಾಗಿದೆ.

- Advertisement -

ಲೋಕ ಸಭಾ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಪ್ರಕರಣದ ಕುರಿತು ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಐವರು ಕಾಂಗ್ರೆಸ್​ ಸಂಸದರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಐವರನ್ನು ಅಮಾನತುಗೊಳಿಸುವ ಗದ್ದಲದ ನಡುವೆಯೇ ನಿರ್ಣಯವನ್ನು ಮಂಡಿಸಿದರು.

ಸದನ ಮತ್ತು ಈ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್ ಅವರ ದುರ್ವರ್ತನೆಗಾಗಿ ಸದನದ ಸೇವೆಯಿಂದ ಅಮಾನತುಗೊಳಿಸಲಾಗಿದೆ.‌



Join Whatsapp