ಮೈಸೂರು: ಸಂಸತ್ ಭವನಕ್ಕೆ ಅಶ್ರುವಾಯು ದಾಳಿ ನಡೆಸಿ ಕೋಲಾಹಲ ಎಬ್ಬಿಸಿದ್ದ ಬಂಧಿತರು ಸಂಸದ ಪ್ರತಾಪ್ ಸಿಂಹ ಐಟಿ ಸೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು. ಬಂಧಿತ ಮನೋರಂಜನ್, ಪ್ರತಾಪ್ ಸಿಂಹ ಬಹಳ ಹತ್ತಿರವಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಡಿಕೇರಿ ಹಾಗೂ ಡೆಲ್ಲಿಯಲ್ಲಿ ಇವರ ಜೊತೆ ಸಭೆ ನಡೆಸಿದ್ದಾರೆ. ಪ್ರತಾಪ್ ಜೊತೆ ಒಂದು ಸಭೆಯು ಆಗಿದೆ. ಆದರೆ ಯಾವಾಗ ಸಭೆ ಆಗಿದೆ ಎಂದು ಗೊತ್ತಿಲ್ಲ. ಪ್ರತಾಪ್ ಸಿಂಹ ಕಚೇರಿ ಸೀಜ್ ಮಾಡಬೇಕು ಎಂದು ಹೇಳಿದ್ದಾರೆ.
ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ದಾಖಲೆ ಇಲ್ಲದೆ ನಾವು ಮಾತನಾಡುತ್ತಿಲ್ಲ. ನಾಳೆ ನ್ಯಾಷನಲ್ ಸೆಕ್ಯೂರಿಟಿ ಕೇಳಿದರೆ ದಾಖಲೆ ನೀಡಬೇಕಾಗುತ್ತದೆ. ಆದರಿಂದ ನಾವು ಹೇಳುವ ವಿಷಯ ಸತ್ಯಕ್ಕೆ ಹತ್ತಿರವಾದದ್ದು ಎಂದಿದ್ದಾರೆ. ಇಲ್ಲಿಯವರೆಗೂ ಬಿಜೆಪಿ ಸಂಸದರು, ಸಚಿವರು, ಗೃಹ ಸಚಿವರು ಒಬ್ಬರು ಪ್ರತಿಕ್ರಿಯೆ ನೀಡಿಲ್ಲ. ಸ್ವತಃ ಪ್ರತಾಪ್ ಸಿಂಹ ಕೂಡ ಒಂದು ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದು 24 ಗಂಟೆಯಾದರೂ ಒಂದು ಟ್ವೀಟ್ ಮಾಡಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಾಳೆ ದಿನ ಕಾಂಗ್ರೆಸ್ನವರೇ ಈ ಘಟನೆ ಮಾಡಿಸಿದ್ದೀರಿ ಎಂದು ಕತೆ ಕಟ್ಟಬಹುದು ಎಂದು ಕಿಡಿಕಾರಿದ್ದಾರೆ.