ಮಹಿಳೆಯ ದೂರನ್ನು ರಾಹುಲ್ ಗಾಂಧಿಗೆ ತಪ್ಪಾಗಿ ಅನುವಾದಿಸಿದ ಪುದುಚೇರಿ ಸಿಎಂ

Prasthutha|

- Advertisement -

ಮೀನುಗಾರರೊಂದಿಗಿನ ಸಂವಾದದ ವೇಳೆ ಪುದುಚೇರಿ ಮುಖ್ಯಮಂತ್ರಿ ವಿ.ಎಸ್. ನಾರಾಯಣಸ್ವಾಮಿ ರಾಹುಲ್ ಗಾಂಧಿಗೆ ಮೀನುಗಾರರ ದೂರನ್ನು ತಪ್ಪಾಗಿ ಅನುವಾದಿಸಿದ್ದಾರೆ. ಪುದುಚೇರಿ ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ಮಾತನಾಡಿದ ಮೀನುಗಾರ ಮಹಿಳೆಯ ಮಾತುಗಳನ್ನು ಬದಲಾಯಿಸಿ ಅವರು ಸರ್ಕಾರವನ್ನು ಹೊಗಳಿದ್ದಾರೆ ಎಂದು ರಾಹುಲ್ ಗಾಂಧಿಗೆ ಮುಖ್ಯಮಂತ್ರಿ ನಾರಾಯಣ ಸ್ವಾಮಿ ತಪ್ಪಾಗಿ ಅನುವಾದಿಸಿದ್ದಾರೆ. ಪುದುಚೇರಿಯಲ್ಲಿ ಮೀನುಗಾರರನ್ನು ಭೇಟಿ ಮಾಡಲು ರಾಹುಲ್ ಮುಖ್ಯಮಂತ್ರಿ ಜೊತೆ ಬಂದಿದ್ದರು.

ನಿವಾರ್ ಚಂಡಮಾರುತದ ನಂತರ ಉಂಟಾದ ಕಷ್ಟಗಳಿಗೆ ತನಗೆ ಸಹಾಯ ಮಾಡಲು ಯಾರೂ ಇರಲಿಲ್ಲ ಮತ್ತು ಮುಖ್ಯಮಂತ್ರಿ ಕೂಡ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಮಹಿಳೆ ದೂರಿದ್ದಾರೆ. ಆದರೆ ಚಂಡಮಾರುತದ ನಂತರ ಸರ್ಕಾರ ಕೈಗೊಂಡ ಕ್ರಮಗಳನ್ನು ಮಹಿಳೆ ಶ್ಲಾಘಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ರಾಹುಲ್ ಗಾಂಧಿಗೆ ತಿಳಿಸಿದ್ದಾರೆ. ನಿವಾರ್ ಚಂಡಮಾರುತದ ಸಮಯದಲ್ಲಿ ತಾನು ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ನೀಡಿದ್ದೇನೆ ಎಂದು ಮಹಿಳೆ ಹೇಳುತ್ತಿದ್ದಾಳೆ ಎಂದು ನಾರಾಯಣಸ್ವಾಮಿ ರಾಹುಲ್‌ಗೆ ತಿಳಿಸಿದ್ದಾರೆ. ರಾಹುಲ್‌ಗೆ ತಪ್ಪಾಗಿ ಅನುವಾದಿಸಿದ್ದ ಪುದುಚೇರಿ ಮುಖ್ಯಮಂತ್ರಿಯವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.



Join Whatsapp