ಮುಖ್ಯಮಂತ್ರಿ, ಸಚಿವರ ಮೇಲೆ ವಾಗ್ದಾಳಿ ಮುಂದುವರಿಸಿದ ಕೇರಳ ರಾಜ್ಯಪಾಲ

Prasthutha|

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯದ ಸಂಘರ್ಷ ಮುಂದುವರೆದಿದ್ದು, ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಸಚಿವರ ವಿರುದ್ಧ ಮತ್ತೆ ರಾಜ್ಯಪಾಲರು ವಾಗ್ದಾಳಿ ನಡೆಸಿದ್ದಾರೆ. ‘ಅವರಿಗೆ ನಾಚಿಕೆಯೇ ಇಲ್ಲ’ ಎಂದು ತಿವಿದಿದ್ದಾರೆ.

- Advertisement -

ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳ ಸೆನೆಟ್‌ಗೆ ತಾವು ಮಾಡಿದ ನಾಮನಿರ್ದೇಶನಗಳ ಬಗ್ಗೆ ಎಡರಂಗದ ಸರ್ಕಾರದ ಮಂತ್ರಿಗಳು ಮಾಡಿರುವ ಟೀಕೆಗೆ ಎಂದು ರಾಜ್ಯಪಾಲರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಾನು ಯಾರನ್ನು ಸೆನೆಟ್‌ಗೆ ನಾಮನಿರ್ದೇಶನ ಮಾಡುತ್ತೇನೆ ಎಂಬುದರ ಬಗ್ಗೆ ಅವರಿಗೆ ಏಕೆ ಬೇಕು? ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ನಾಚಿಕೆಯೇ ಇಲ್ಲ ಎಂದು ಖಾನ್ ಹೇಳಿದ್ದಾರೆ.

- Advertisement -

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಖಾನ್​, ಈ ಕುರಿತು ತನಿಖೆಗೆ ಆದೇಶಿಸಿದ್ದೇನೆ. ಮುಖ್ಯಮಂತ್ರಿ ಮತ್ತು ಸಚಿವರು ಪ್ರಸ್ತಾಪಿಸಿದ ಹೆಸರುಗಳನ್ನು ವಿಸಿಗಳು ಶಿಫಾರಸು ಮಾಡುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿ ಅವರು ಮಾಡಿದ ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಲ್ವರು ವಿದ್ಯಾರ್ಥಿಗಳ ನಾಮನಿರ್ದೇಶನವನ್ನು ಕೇರಳ ಹೈಕೋರ್ಟ್ ತಡೆಹಿಡಿದಿದೆ ಎಂದು ಪ್ರಶ್ನಿಸಿದಾಗ, ಇದರ ಕಾರಣಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.



Join Whatsapp