ಇಸ್ರೇಲ್ ಅಮಾನವೀಯತೆಯನ್ನು ಖಂಡಿಸುತ್ತಿರುವಾಗಲೇ ಹೃದಯಾಘಾತಕ್ಕೊಳಗಾದ ಟರ್ಕಿ ಸಂಸದ!

Prasthutha|

ವೀಡಿಯೋ + ಸುದ್ದಿ

- Advertisement -

ಟರ್ಕಿ:ಅ ಸಂಸತ್ತಿನಲ್ಲಿ ನಡೆದ ನಾಟಕೀಯ ಘಟನೆಯಲ್ಲಿ, ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಭಾಷಣ ಮಾಡುವಾಗ 53 ವರ್ಷದ ಸಂಸದರಿಗೆ ಹೃದಯಾಘಾತವಾಗಿರುವ ಘಟನೆ ನಡೆದಿದೆ.

ಸಾದೆತ್ ಪಕ್ಷದ ನಾಯಕ ಹಸನ್ ಬಿಟ್ಮೆಝ್ ಇಸ್ರೇಲ್ ಗಾಝಾದಲ್ಲಿ ನಾಗರಿಕ ಹತ್ಯೆ ಮಾಡುತ್ತಿರುವುದರ ಬಗ್ಗೆ ಭಾವೋದ್ರಿಕ್ತರಾಗಿ ಆಕ್ರೋಶ ಹೊರಹಾಕುತ್ತಿದ್ದರು. ಅದೇ ಸಮಯದಲ್ಲಿ ಹೃದಯಾಘಾತ ಸಂಭವಿಸಿದ್ದು, ಆ ದೃಶ್ಯ ವೈರಲ್ ಆಗಿದೆ.

- Advertisement -

ಹೃದಯಾಘಾತವಾಗುವ ಮೊದಲು ಬಿಟ್ಮೆಝ್, ನಾವು ಬಹುಶಃ ನಮ್ಮ ಆತ್ಮಸಾಕ್ಷಿಯಿಂದ ಮರೆಮಾಡಬಹುದು ಆದರೆ ಇತಿಹಾಸದಿಂದ ಅಲ್ಲ. ಇಸ್ರೇಲ್ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.

ಸದ್ಯ ವಿಡಿಯೊ ತುಣುಕುಗಳು ಈ ಘಟನೆಯನ್ನು ಸೆರೆಹಿಡಿದಿದ್ದು, ಬಿಟ್ಮೆಝ್ ಕುಸಿದು ಬೀಳೋದನ್ನು ತೋರಿಸುತ್ತದೆ. ತುರ್ತು ಪ್ರತಿಸ್ಪಂದಕರು ಸಿಪಿಆರ್ ನೀಡಿದ ಬಳಿಕ ನಂತರ ಅವರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಗಿದೆ. ಎರಡು ಹೃದಯದ ಸ್ಟೆಂಟ್ಗಳನ್ನು ಹೊಂದಿರುವ ಮಧುಮೇಹಿ ಬಿಟ್ಮೆಝ್ ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ತಿಳಿಸಿದೆ ಎಂದು ವರದಿಯಾಗಿದೆ.



Join Whatsapp