ಇಸ್ರೇಲ್-ಹಮಾಸ್‌ ಕದನವಿರಾಮ ಘೋಷಿಸಲಿ: ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತ

Prasthutha|

ಇಸ್ರೇಲ್-‌ ಹಮಾಸ್‌ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾನವೀಯ ನೆಲೆಯಲ್ಲಿ ತಕ್ಷಣವೇ ನಿಲ್ಲಿಸಬೇಕು ಮತ್ತು ಬೇಷರತ್ತಾಗಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂಬ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.

- Advertisement -

ವಿಶ್ವಸಂಸ್ಥೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಲ್ಜೀರಿಯಾ, ಬಹ್ರೈನ್‌, ಇರಾಕ್‌, ಕುವೈಟ್‌, ಓಮಾನ್‌, ಕತಾರ್‌, ಸೌದಿ ಅರೇಬಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಪ್ಯಾಲೆಸ್ತೇನ್‌ ಸೇರಿದಂತೆ ಹಲವು ದೇಶಗಳು ಇಸ್ರೇಲ್-ಹಮಾಸ್‌ ನಡುವೆ ತಕ್ಷಣವೇ ಕದನವಿರಾಮ ಘೋಷಿಸಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಂಡಿದ್ದವು. ಭಾರತ ಈ ನಿರ್ಣಯದ ಪರವಾಗಿ ಮತ ಚಲಾಯಿಸಿದೆ.

ಅಮೆರಿಕ, ಇಸ್ರೇಲ್‌ ಸೇರಿದಂತೆ ಹತ್ತು ದೇಶಗಳು ವಿರೋಧಿಸಿ ಮತ ಚಲಾಯಿಸಿವೆ. ಸುಮಾರು 23 ದೇಶಗಳು ಸಭೆಗೆ ಗೈರುಹಾಜರಾಗಿವೆ ಎಂದು ವರದಿ ತಿಳಿಸಿದೆ.



Join Whatsapp