ನವದೆಹಲಿ: ಆಧಾರ್ ಕಾರ್ಡ್ ಉಚಿತ ನವೀಕರಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ 14, 2024 ರವರೆಗೆ ಉಚಿತವಾಗಿ ಮಾಡಬಹುದು ಎಂದು ಯುಐಡಿಎಐ ತಿಳಿಸಿದೆ.
ಯುಐಡಿಎಐ ಉಚಿತ ಆಧಾರ್ ನವೀಕರಣಕ್ಕಾಗಿ 2023 ರ ಡಿಸೆಂಬರ್ 14 ರ ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. ಅಂದರೆ ನಾಳೆಗೆ ಅದು ಕೊನೆಗೊಳ್ಳಬೇಕಿತ್ತು, ಆದರೆ ಪ್ರಾಧಿಕಾರವು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
ಎಲ್ಲಾ ಆಧಾರ್ ಕಾರ್ಡ್ ಬಳಕೆದಾರರು ತಮ್ಮ 10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕಾಗುತ್ತದೆ. ಆಧಾರ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು ಎಂದು ಯುಐಡಿಎಐ ಹೇಳಿದೆ.
https://myaadhaar.uidai.gov.in/ ವೆಬ್ ಸೈಟ್ ಗೆ ಹೋಗಿ ಮುಖಪುಟ ತೆರೆದಾಗ, ನೀವು ಡಾಕ್ಯುಮೆಂಟ್ ನವೀಕರಣ ಆಯ್ಕೆಯನ್ನು ತೆರೆಯುವ ಮೂಲಕ ಆಧಾರ್ ನವೀಕರಿಸಬಹುದಾಗಿದೆ.